/newsfirstlive-kannada/media/post_attachments/wp-content/uploads/2024/03/Rohit_Hardik00.jpg)
ಸದ್ಯ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ.
ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆಂಡೆತ್ತಿದ ಟ್ರಾವೀಸ್ ಹೆಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 24 ಬಾಲ್ನಲ್ಲಿ 3 ಸಿಕ್ಸರ್, 9 ಫೋರ್ ಸಮೇತ 64 ರನ್ ಸಿಡಿಸಿ ದಾಖಲೆ ಬರೆದರು. ಇವರ ಸ್ಟ್ರೈಕ್ ರೇಟ್ 260 ಇತ್ತು.
ಓಪನರ್ ಟ್ರಾವಿಸ್ ಹೆಡ್ಗೆ ಸಾಥ್ ನೀಡಿದ ಅಭಿಶೇಕ್ ಶರ್ಮಾ ಮೊದಲು ಕೇವಲ 16 ಬಾಲ್ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್ನಲ್ಲಿ 7 ಸಿಕ್ಸರ್, 3 ಫೋರ್ ಸಮೇತ 63 ರನ್ ಚಚ್ಚಿ ಕ್ಯಾಚ್ ನೀಡಿದ್ರು.
Rohit Sharma sent hardik pandya on the boundary line ???
This is peak cinema ????pic.twitter.com/lR9uJNp4IW
— ᴘʀᴀᴛʜᴍᴇsʜ⁴⁵ (@45Fan_Prathmesh)
Rohit Sharma sent hardik pandya on the boundary line 😭😭🔥
This is peak cinema 😭😭🔥🔥https://t.co/lR9uJNp4IW— ` (@45Fan_Prathmesh) March 27, 2024
">March 27, 2024
ಇನ್ನು, ಏಡನ್ ಮರ್ಕ್ರಮ್ ಮತ್ತು ಹೆನ್ರಿಕ್ ಕ್ಲಾಸೆನ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾರ್ದಿಕ್ ಕ್ಯಾಪ್ಟನ್ಸಿಯಿಂದಲೇ ಹೀಗಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇಂದು ಯಾರಿಗೂ ಬೌಲಿಂಗ್ ನೀಡಿದ್ರೂ ಹೇಗೆ ಫೀಲ್ಡ್ ಸೆಟ್ ಮಾಡಿದ್ರೂ ಹಾರ್ದಿಕ್ ಫೋರ್, ಸಿಕ್ಸರ್ಗಳನ್ನು ತಡೆಯಲು ಆಗಲಿಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚದೆ ರೋಹಿತ್ ಮೊರೆ ಹೋಗಿದ್ದಾರೆ.
ಮೊನ್ನೆ ರೋಹಿತ್ಗೆ ನೀನು ಹಿಂದೆ ಹೋಗು ಎಂದಿದ್ದ ಪಾಂಡ್ಯ ಇಂದು ಹಿಟ್ಮ್ಯಾನ್ ಮಾತು ಕೇಳಿದ್ರು. ರೋಹಿತ್ ಶರ್ಮಾನೇ ಕೊನೆಗೆ ಫೀಲ್ಡ್ ಸೆಟ್ ಮಾಡಿದ್ರು. ಹಿಟ್ಮ್ಯಾನ್ ಹೇಳಿದಂತೆ ಹಾರ್ದಿಕ್ ಬೌಂಡರಿ ಲೈನ್ಗೆ ಹೋದರು.
ಇದನ್ನೂ ಓದಿ:ಕೇವಲ 24 ಬಾಲ್ನಲ್ಲಿ 62 ರನ್ ಚಚ್ಚಿದ ಟ್ರಾವೀಸ್ ಹೆಡ್.. ಬೆಚ್ಚಿಬಿದ್ದ ಹಾರ್ದಿಕ್ ಪಾಂಡ್ಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ